ವಿಶೇಷ ಸೂಚನೆ

ವೈದ್ಯಕೀಯ ವೆಚ್ಚಗಳ ಮರುಪಾವತಿ

ಸಾಹಿತಿ/ಕಲಾವಿದರುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ಇರುವ ವೈದ್ಯಕೀಯ ಗುರುತಿನ ಚೀಟಿ ನೀಡಿಕೆ ನಿಯಮಗಳು

1. ಸಾಹಿತ್ಯ, ಸಂಗೀತ ಇತರೆ ಕಲೆಗಾಗಿ ಕೇಂದ್ರ ಅಥವಾ ರಾಜ್ಯ ಪ್ರಶಸ್ತಿ ಪಡೆದವರು.

2. ರಾಜ್ಯ ಅಥವಾ ಕೇಂದ್ರ ಅಕಾಡೆಮಿಗಳಲ್ಲಿ ಪ್ರಶಸ್ತಿ ಪಡೆದವರು.

3. ಕೇಂದ್ರ ಅಥವಾ ರಾಜ್ಯದಿಂದ ಪುಸ್ತಕ ಬಹುಮಾನ ಪಡೆದವರು.

4. ಮಾಜಿ ಅಥವಾ ಹಾಲಿ ಕೇಂದ್ರ ಅಥವಾ ರಾಜ್ಯ ಸಾಹಿತ್ಯ-ಸಂಗೀತ-ಕಲಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು.

5. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇತರ ಪ್ರತಿಷ್ಠಿತ ಕನ್ನಡ ಪರ ಸಂಘಗಳ ಸಾಹಿತಿ ಲೇಖಕ ಅಧ್ಯಕ್ಷರು.

6. ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಸಂಗೀತೋತ್ಸವ ಸಮ್ಮೇಳನದ ಅಧ್ಯಕ್ಷರು.

7. ಸಾಹಿತ್ಯ ಹಾಗೂ ಕಲೆಗಾಗಿ ವಿಶಿಷ್ಟ ಸೇವೆ ಸಲ್ಲಿಸಿದವರು.

2. ವೈದ್ಯಕೀಯ ವೆಚ್ಚ ಮರುಪಾವತಿ

2013-14ನೇ ಸಾಲಿನಲ್ಲಿ ಇಲಾಖಾ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ (ಅಕಾಡೆಮಿ ಅಧ್ಯಕ್ಷರು, ಸದಸ್ಯರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಕೇಂದ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಿ ವೈದ್ಯಕಿಯ ಗುರುತಿನ ಚೀಟಿ ಪಡೆದಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರಿನೌಕರರಿಗೆ ಇರುವ ನಿಯಮದಂತೆ ಮರು ಪಾವತಿ ಮಾಡಿಕೊಡಲಾಗುವುದು.

2013-14ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ರೂ.13,02,000/- ಗಳನ್ನು ಕಾಯ್ದಿರಿಸಲಾಗಿದ್ದು ಅದರಂತೆ 24 ಜನ ಕಲಾವಿದರಿಗೆ ಮರುಪಾವತಿ ಮಾಡಲಾಗಿದೆ.

ಕ್ರ.ಸಂ ವೈದ್ಯಕೀಯ ಸೌಲಭ್ಯ ಪಡೆದವರ ಹೆಸರು ಮೊತ್ತ
01. ರಂಗಪ್ಪ ಸೂರ್ಯವಂಶಿ, ಬೆಂಗಳೂರು ರೂ.7078/-
02. ಮೂಡಲಗಿರಿಯಯ್ಯ, ಬೆಂಗಳೂರು ರೂ.30,516/-
03. ಇಂದಿರಮ್ಮ, ಮೈಸೂರು ರೂ.8,201/-
04. ಹೆಚ್.ಕೆ.ರಾಮಸ್ವಾಮಿ, ಬೆಂಗಳೂರು ರೂ.42,802/-
05. ಶ್ಯಾಮಲಾ ಜಹಗೀರ್ ದಾರ್, ಬೆಂಗಳೂರು ರೂ.26,389/-
06. ಎ.ಎನ್.ಚನ್ನಬಸವಯ್ಯ, ತುಮಕೂರು ರೂ.6528/-
07. ಶ್ರೀಮತಿ ಶಾಂತಮ್ಮ ಪತ್ತಾರ್, ಬಾಗಲಕೋಟೆ ರೂ.95,517/-
08. ಶ್ರೀ ಚೇತನ ರಾಮರಾವ್, ಬೆಂಗಳೂರು ರೂ.1562/-
09. ಶಾಂತಾ ದೇವಿ, ಮೈಸೂರು ರೂ.7,301/-
10. ಚಿಂದೋಡಿ ಶಂಬುಲಿಂಗಪ್ಪ, ದಾವಣಗೆರೆ ರೂ.2,629/-
11. ವಿನೋದಮ್ಮ, ಬೆಂಗಳೂರು ರೂ.2,304/-
12. ದಿ|| ಬಸವರಾಜ್ ಹೊಸಮನಿ, ಬಾಗಲಕೋಟೆ ರೂ.9745/-
13. ಕೆ.ಗೂಳಪ್ಪ, ಕೋಲಾರ ರೂ.28625/-
14. ಹೊ.ನಾ.ರಾಘವೇಂದ್ರ, ಶಿವಮೊಗ್ಗ ರೂ.2026/-
15. ರಂಗನಾಯಕಮ್ಮ, ಬೆಂಗಳೂರು ರೂ.19505/-
16. ಪಿ.ಆರ್.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ರೂ.3813/-
17. ಎಂ.ವಿ.ವೀರಪ್ಪ, ಶಿವಮೊಗ್ಗ ರೂ.2,666/-
18. ಲಕ್ಮಣ್ ರಾವ್ ಮಾನೆ, ಗುಲ್ಬರ್ಗಾ ರೂ.14,878
19. ಪ್ರೇಮ ಬಸವರಾಜ್ ಪಾಟಿಲ್, ಬಾಗಲಕೋಟೆ ರೂ.3,403/-
20. ಕಾದರಯ್ಯ, ಬೆಂಗಳೂರು ರೂ.7,30/
21. ವಿನೋದಮ್ಮ, ಬೆಂಗಳೂರು ರೂ.11,804/-
22. ಎ.ಎಸ್.ನಂಜಪ್ಪ, ಬೆಂಗಳೂರು ರೂ.2918/-
23. ಜಿ.ಎಸ್.ಶಿವರುದ್ರಪ್ಪ, ಬೆಂಗಳೂರು ರೂ.7,13,088/-
24. ಬಿ.ಹೆಚ್.ಮುನಿಹನುಮಯ್ಯ, ಬೆಂಗಳೂರು ರೂ.24,666/-
25. ಹೆಚ್.ಎಸ್.ಶ್ರೀಕಂಠಯ್ಯ, ರಾಮನಗರ ರೂ.1726/-