ವಿಶೇಷ ಸೂಚನೆ

ಯು. ಎಸ್. ಕೃಷ್ಣರಾವ್

ವಿಜ್ಞಾನದ ಅಧ್ಯಾಪಕನಾಗಿದ್ದರೂ, ಕಾಲಿಗೆ ಗೆಜ್ಜೆಕಟ್ಟಿ, ಹೆಜ್ಜೆ ಇಕ್ಕಿ ನಾಟ್ಯವಾಡುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೀರ್ತಿ ಪಡೆದ ಯು.ಎಸ್.ಕೃಷ್ಣರಾವ್ ಜನಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಮಲ್ಲಾಪುರದಲ್ಲಿ. ತಂದೆ ಉಭಯಕರ ಶಿವರಾಂ, ತಾಯಿ ಗಿರಿಜಾಬಾಯಿ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದ ಕೃಷ್ಣರಾವ್ ಅದೇ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೇ ಭರತನಾಟ್ಯದತ್ತ ಆಕರ್ಷಿತರಾಗಿದ್ದ ಕೃಷ್ಣರಾವ್ ಆಕರ್ಷಣೀಯ ಮೂಲಸೆಲೆ ಖ್ಯಾತ ನೃತ್ಯಪಟು ರಾಮಗೋಪಾಲ್ ಅವರ ನೃತ್ಯ ಪ್ರದರ್ಶನ. ಮನೆಯವರ ಕಣ್ಣುತಪ್ಪಿಸಿ, ಕೋಲಾರದ ಪುಟ್ಟಪ್ಪನವರಿಂದ ಭರತನಾಟ್ಯದ ಪ್ರಾರಂಭಿಕ ಪಾಠ ಕಲಿತರು. ಕೃಷ್ಣರಾವ್ ಅವರ ವಿದ್ಯಾಥರ್ಿನಿಯಾಗಿದ್ದ ಚಂದ್ರಭಾಗದೇವಿಯವರಿಗೂ ನೃತ್ಯದಲ್ಲಿ ಒಲವಿದ್ದರಿಂದ, ನೃತ್ಯಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡುವ ಸಂಕಲ್ಪದೊಂದಿಗೆ, ಗುರು- ಶಿಷ್ಯಯರು ಸತಿ-ಪತಿಗಳಾದರು.

ಮದುವೆಯ ನಂತರ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಿದ ಕೃಷ್ಣರಾವರು ತಂಜಾವೂರಿಗೆ ಹೋಗಿ ಮೀನಾಕ್ಷಿ ಸುಂದರಂ ಪಿಳ್ಳೆ ಅವರಿಂದ ಹೆಚ್ಚಿನ ತರಬೇತಿ ಪಡೆದರು. ನಂತರ ದಂಪತಿಗಳಿಬ್ಷರು ಭರತನಾಟ್ಯ ಕಲಿಸಲು ನಿರ್ಧರಿಸಿದರು. ಅವರಿಬ್ಷರ ಪರಿಶ್ರಮದ ಫಲವೇ ಮಹಾಮಾಯಾ ನಾಟ್ಯಶಾಲೆ. ಇಲ್ಲಿ ರಾಜ್ಯದ, ಹೊರರಾಜ್ಯಗಳಷ್ಟೇಯಲ್ಲದೆ ಹೊರದೇಶಗಳಿಂದಲೂ ವಿದ್ಯಾರ್ಥಿಗಳು ಬಂದು ನೃತ್ಯ ಕಲಿತು ಪ್ರಖ್ಯಾತರಾಗಿದ್ದಾರೆ.

ಭರತ ನಾಟ್ಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಾತ್ಯಕ್ಷಿಕೆ ಶಿಬಿರಗಳನ್ನು, ಕಾರ್ಯಾಗಾರಗಳನ್ನು ದೇಶ - ವಿದೇಶಗಳಲ್ಲಿ ನಡೆಸಿದ ಈ ದಂಪತಿಗಳು, ರಾಣಿ ಶಾಂತಲಾ, ಗೀತ ಗೋವಿಂದ, ಕಾಮದಹನ ಮುಂತಾದ ಕಲಾ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ.

ಕೃಷ್ಣರಾವ್ ಅವರು ನೃತ್ಯಕ್ಕೆ ಸಂಬಂಧಿಸಿದಂತೆ ಕನ್ನಡ - ಇಂಗ್ಲಿಷ್ಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳೆಂದರೆ - ಭಾರತೀಯ ನೃತ್ಯ ನಿಘಂಟು, ಟೆಕ್ನಿಕಲ್ ಟರ್ಮ್ಸ್ ಆಫ್ ಭರತನಾಟ್ಯಂ ಮುಂತಾದವು. ಕರ್ನಾಟಕ ನೃತ್ಯ ಕಲಾಪರಿಷತ್ತಿನ ಅಧ್ಯಕ್ಷರಾಗಿಯೂ, ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಕೃಷ್ಣರಾವ್ ಅವರ ನಾಟ್ಯ ಪ್ರತಿಭೆಯನ್ನು ಅರಸಿಬಂದ ಪ್ರಶಸ್ತಿ - ಪುರಸ್ಕಾರಗಳು ಹಲವು. ಅವುಗಳಲ್ಲಿ ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪ್ರಮುಖವಾದವು.