ವಿಶೇಷ ಸೂಚನೆ

ಮಾಸಾಶನ

ಕಷ್ಟಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಾಶನ ಮಂಜೂರಾತಿ ವಿವರ.

1) ಕ.ಸಂ.ವಾ.ಪ್ರ:48:ಕಗೌಧ:2007, ದಿನಾಂಕ: 31/08/2007ರ ಆದೇಶದಲ್ಲಿ 800 ಮಂದಿ, ಸಾಹಿತಿ / ಕಲಾವಿದರಿಗೆ.

2) ಕ.ಸಂ.ವಾ.ಪ್ರ:07:ಕಗೌಧ:2009, ದಿನಾಂಕ: 25/05/2010ರ ಆದೇಶದಲ್ಲಿ 400 ಮಂದಿ, ಸಾಹಿತಿ / ಕಲಾವಿದರಿಗೆ.

3) ಕ.ಸಂ.ವಾ.ಪ್ರ:39:ಕಗೌಧ:2009, ದಿನಾಂಕ: 14/01/2014ರ ಆದೇಶದಲ್ಲಿ 1200 ಮಂದಿ, ಸಾಹಿತಿ / ಕಲಾವಿದರಿಗೆ.

4) ಕ.ಸಂ.ವಾ.ಪ್ರ:23:ಕಗೌಧ:2012, ದಿನಾಂಕ: 05/12/2012ರ ಆದೇಶದಲ್ಲಿ 1600 ಮಂದಿ, ಸಾಹಿತಿ / ಕಲಾವಿದರಿಗೆ.

5) ಕ.ಸಂ.ವಾ.ಪ್ರ:03:ಕಗೌಧ:2013, ದಿನಾಂಕ: 22/05/2014ರ ಆದೇಶದಲ್ಲಿ 1603 ಮಂದಿ, ಸಾಹಿತಿ / ಕಲಾವಿದರಿಗೆ.

6) ಕ.ಸಂ.ವಾ.ಪ್ರ:04:ಕಗೌಧ:2015, ದಿನಾಂಕ: 10/09/2015ರ ಆದೇಶದಲ್ಲಿ 3527 ಮಂದಿ, ಸಾಹಿತಿ / ಕಲಾವಿದರಿಗೆ.

ಕಷ್ಟ ಪರಿಸ್ಥಿತಿಯಲ್ಲಿರುವ ಮೃತಪಟ್ಟ ಸಾಹಿತಿ/ಕಲಾವಿದರುಗಳ ಪತ್ನಿಯರಿಗೆ ಮಾಸಿಕ ರೂ:500/-ಗಳ ವಿಧವಾ ಮಾಸಾಶನವನ್ನು ಮಂಜೂರು ಮಾಡಲಾಗುತ್ತಿದೆ.

ವಿಧವಾ ಮಾಸಾಶನ ಮಂಜೂರಾತಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರ

1. ಈ ಯೋಜನೆಯು ಸಾಹಿತಿ/ಕಲಾವಿದರು ಮೃತಪಟ್ಟ ದಿನಾಂಕದಿಂದ ಜಾರಿಗೆ ಬರುವುದು.

2. ಈ ಯೋಜನೆಯಡಿ ಕಷ್ಟಪರಿಸ್ಥಿತಿಯಲ್ಲಿ ಇದ್ದು, ರಾಜ್ಯ ಸರ್ಕಾರದಿಂದ ಕಲಾವಿದರು ಮಾಸಾಶನ ಅಥವಾ ಗೌರವಧನ ಪಡೆಯುತ್ತಿದ್ದು ಕಲಾವಿದರ ಕುಟುಂಬದವರು ಸಾಮಾನ್ಯವಾಗಿ ರೂ: 500/-ಗಳ ವಿಧವಾ ಮಾಸಾಶನ ಜೀವನ ಪರ್ಯಂತ ಪಡೆಯಲು ಅರ್ಹರಿರುತ್ತಾರೆ.

3. ಕುಟುಂಬದ ವ್ಯಾಪ್ತಿಯಲ್ಲಿ ಕಲಾವಿದರ ವಿಧವಾ ಪತ್ನಿ ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

4. ವಿಶೇಷ ಪ್ರಸಂಗಗಳಲ್ಲಿ ಕಲಾವಿದರ ಮಾಸಾಶನ ಅರ್ಜಿ ಅಕಾಡೆಮಿಗಳೀಂದ ಶಿಫಾರಸ್ಸಾಗಿದ್ದು, ಮಾಸಾಶನ ಮಂಜೂರಾಗುವ ಮೊದಲೇ ಕಲಾವಿದರು ತೀರಿಕೊಂಡಿದ್ದಲ್ಲಿ ಕಷ್ಟಪರಿಸ್ಥಿಯಲ್ಲಿರುವ ಕಲಾವಿದರ ಪತ್ನಿ ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

5. ಒಟ್ಟು ವಾರ್ಷಿಕ ಆದಾಯ ಮಿತಿ ರೂ:15,000/-ಗಳಿಗೆ ಮೀರಿರಬಾರದು.

6. ವಿಧವಾ ಮಾಸಾಶನ ದೊರೆಯಲಾರಂಭಿಸಿದ ಮೇಲೆ ವಿಧವೆಯ ಅಪ್ರಾಪ್ತ ವಯಸ್ಸಿನ ಮಕ್ಕಳು ವಯಸ್ಕರಾಗಿ ಸಂಪಾದನೆ ಪ್ರಾರಂಬೀಸಿದ ನಂತರವೂ ಆ ವಿಧವೆಯು ವಿಧವಾ ಮಾಸಾಶನಕ್ಕೆ ಅರ್ಹಳು ಎಂದು ಪರಿಗಣಿಸಬೇಕು.

7. ಆಕೆಯ ಹೆಣ್ಣುಮಕ್ಕಳು ವಯಸ್ಕರಾಗಿ ಸಂಪಾದಿಸಲು ಆರಂಭಿಸಿದರೂ ಅವರನ್ನು ವಾರ್ಷಿಕ ಆದಾಯ ಲೆಕ್ಕ ಮಾಡುವಾಗ ಕುಟುಂಬಕ್ಕೆ ಸೇರಿದವರೆಂದು ಪರಿಗಣಿಸಲಾಗುವುದಿಲ್ಲ.

8. ಮಾಸಾಶನ ಪಡೆಯುತ್ತಿರುವ ಕಲಾವಿದ ನಿಧನ ಹೊಂದಿದಾಗ ಮರಣ ಕಾಲದವರೆಗೂ ಆತನಿಗೆ, ಆಕೆಗೆ ಸಲ್ಲಬೇಕಾದ ಮಾಸಾಶನದ ಹಣವೇನಾದರೂ ಬಾಕಿ ಇದ್ದಲ್ಲಿ ಅದನ್ನು ಆತನ ಕುಟುಂಬದ ಸದಸ್ಯರಿಗೆ ರಾಜ್ಯ ಖಜಾನೆಯು ನಿಯಮಾನುಸಾರ ಪಾವತಿಸಬೇಕು.

9. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

ಅ. ಮೃತ ಕಲಾವಿದರ ಮೂಲ ಮರಣ ಪ್ರಮಾಣಪತ್ರ.

ಆ. ತಹಶೀಲ್ದಾರ್‍ರಿಂದ ಅಥವಾ ಗ್ರಾಮ ಲೆಕ್ಕಾಧೀಕಾರಿಗಳಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರ.

ಇ. ತಹಶೀಲ್ದಾರ್‍ರಿಂದ ಪಡೆದ ವಂಶವೃಕ್ಷ ಅಥವಾ ಉತ್ತರಜೀವಿತ ಪ್ರಮಾಣ ಪತ್ರ.

ಈ. ನಾಲ್ಕು ಭಾವಚಿತ್ರ ಮತ್ತು ಮಾದರಿ ಸಹಿಯ ದಾಖಲೆಗಳು.

ಉ. ಮೃತ ಕಲಾವಿದರು ಮಾಸಾಶನ ಪಡೆಯುತ್ತಿದ್ದ ಮೂಲ ಪೆನ್‍ಷನ್ ಪುಸ್ತಕ.

ಊ. ವೈದ್ಯಕೀಯ ಗುರುತಿನ ಚಿಹ್ನೆಯ ದಾಖಲೆ.

ನಿಗದಿತ ವಿಧವಾ ಮಾಸಾಶನ ಅರ್ಜಿಯನ್ನು ಆಯಾಯ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು

ಸಂಸ್ಕøತಿ ಇಲಾಖೆ, ಇವರ ಮೂಲಕ ಸಲ್ಲಿಸಬೇಕು.

10. ಜಿಲ್ಲಾ ಸಹಾಯಕ ನಿರ್ದೇಶಕರಿಂದ ಬಂದ ವಿಧವಾ ಮಾಸಾಶನ ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮುಖಾಂತರ ವಿಧವಾ ಮಾಸಾಶನ ಮಂಜೂರು ಮಾಡಲು ಸರ್ಕಾರಕ್ಕೆ ಕಳುಹಿಸಿಕೊಡಬೇಕು.