ವಿಶೇಷ ಸೂಚನೆ

ಸಹಯೋಗ ಶಾಖೆ


• ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ

• ವೃತ್ತಿಯಲ್ಲಿ ರಂಗಭೂಮಿಯನ್ನೇ ಅವಲಂಭಿಸಿ ರಂಗಭೂಮಿಯ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಗಣನೀಯ ಕೊಡುಗೆಯನ್ನು ಸಲ್ಲಿಸುತ್ತಿರುವಂತಹ ರಂಗಭೂಮಿ ನಿರತ ನಾಟಕ ಕಂಪನಿಗಳಿಗೆ ಧನಸಹಾಯ ನೀಡುವುದು.

• ವೃತ್ತಿರಂಗ ಭೂಮಿ ಕಾಯಕಲ್ಪ ಯೋಜನೆಯಡಿ ಅನುದಾನ ಕೋರಿ ಅರ್ಜಿ ಸಲ್ಲಿಸುವ ವೃತ್ತಿ ನಾಟಕ ಕಂಪನಿಗಳು ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವರದಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

1. ಪ್ರತಿ ವರ್ಷ ಏಪ್ರಿಲ್‍ನಿಂದ ಮಾರ್ಚ್ ಅಂತ್ಯದವರೆಗೆ ಕನಿಷ್ಠ 200ದಿನಗಳು ಪ್ರತಿದಿನ 2ಪ್ರದರ್ಶನಗಳಂತೆ ನಿರಂತರವಾಗಿ ನಾಟಕ ನಡೆದಿರಬೇಕು. ಅಗತ್ಯ ದಾಖಲೆ.
2. ನಾಟಕ ನಡೆದ ಬಗ್ಗೆ ಸ್ಥಳದ ಆರಕ್ಷಕ ವೃತ್ತ ನಿರೀಕ್ಷಕರಿಂದ ದೃಢೀಕರಿಸಿದ ಪ್ರಮಾಣ ಪತ್ರ.
3. ತಹಶೀಲ್ದಾರ್ ಅವರಿಂದ ಪಡೆದ ಲೈಸನ್ಸ್ ಪ್ರತಿ ದೃಢೀಕರಿಸಿ ಒದಗಿಸುವುದು.
4. ನಾಟಕ ನಡೆದ ಬಗ್ಗೆ ತಹಶೀಲ್ದಾರ್‍ರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರ.
5. ನಾಟಕ ನಡೆದ ಸ್ಥಳದಲ್ಲಿ ಪಾವತಿಸಿದ ವಿದ್ಯುತ್ ದೃಢೀಕರಣ ಪ್ರಮಾಣ ಪತ್ರ.
6. ನಾಟಕಗಳಲ್ಲಿ ಭಾಗವಹಿಸಿದ ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ ಅವರ ಸಹಿಯೊಂದಿಗೆ, ಮಾಲೀಕರು ದೃಢೀಕರಿಸಿ ಒದಗಿಸುವುದು.
7. ನಾಟಕ ಪ್ರದರ್ಶನಕ್ಕೆ ಸಿದ್ಧಪಡಿಸಿದ ಆಹ್ವಾನಪತ್ರಿಕೆ, ಕರಪತ್ರ (ಹ್ಯಾಂಡ್ ಬಿಲ್)ಗಳನ್ನು ಒದಗಿಸುವುದು.
8. ಪ್ರಚಾರಕ್ಕೆ ಬಳಸಿದ ಮೈಕ್ ಲೈಸನ್ಸ್ ಪ್ರತಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಒದಗಿಸುವುದು.
9. ಕಲಾವಿದರಿಗೆ ಪಾವತಿಸಿದ ಸಂಭಾವನೆಯ ದೃಢೀಕೃತ ವೇತನ ಬಟವಾಡಿಯ ಪಟ್ಟಿಯ ನಕಲು ಒದಗಿಸುವುದು.
10. ನಾಟಕ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಲಾವಿದರು, ತಂತ್ರಜ್ಞರು, ಗೇಟ್ ಕೀಪರ್, ಮ್ಯಾನೇಜರ್ ಇವರುಗಳ ಮಾಹಿತಿಯನ್ನೊಳಗೊಂಡ ವಿವರ ಒದಗಿಸುವುದು. (ಕಂಪನಿಗೆ ಇಲಾಖೆ ಪ್ರತಿನಿಧಿಗಳು ಭೇಟಿ ನೀಡಿದಾಗ ಇವರುಗಳು ಸ್ಥಳದಲ್ಲಿ ಹಾಜರಿರಬೇಕು).
11. ಸಂಸ್ಥೆಯು ನಡೆಸಿದ ಆರ್ಥಿಕ ವ್ಯವಹಾರಗಳ ಕುರಿತು ಲೆಕ್ಕಪರಿಶೋಧಕರಿಂದ ಪಡೆದ ಲೆಕ್ಕಪಟ್ಟಿ ಹಣಬಳಕೆ ಪ್ರಮಾಣ ಪತ್ರ ಒದಗಿಸುವುದು.






ಲೆಕ್ಕಶೀರ್ಷಿಕೆ 2205-00-102-1-68-059(ಯೋಜನೆ)ಯಡಿಯಲ್ಲಿ ಧನಸಹಾಯ
ಬಿಡುಗಡೆ ಮಾಡಲಾದ ವೃತ್ತಿ ನಾಟಕ ಕಂಪನಿಗಳ ವಿವರ.

ಕ್ರ.ಸಂ.ವೃತ್ತಿ ನಾಟಕ ಕಂಪನಿಗಳ ವಿವರಮೊತ್ತ (ರೂ.ಗಳಲ್ಲಿ)
1. ಮಾಲೀಕರು, ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಗುಡಗೇರಿ, ಧಾರವಾಡ 7,00,000/-
2. ಶ್ರೀ ರೇವಣಸಿದ್ದಯ್ಯ, ಕಾರ್ಯದರ್ಶಿ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ, ಗದಗ 7,00,000/-
3. ಶ್ರೀ ಚಿಂದೋಡಿ ಶ್ರೀಕಂಠೇಶ್, ಮಾಲೀಕರು,ಶ್ರೀ ಕೆ.ಬಿ.ಆರ್. ಡ್ರಾಮಾ ಕಂಪನಿ, ದಾವಣಗೆರೆ 7,00,000/-
4. ಶ್ರೀ ಕೆ.ಬಿ.ರೇಣುಕಾ ಶಂಕರ್, ಕಾರ್ಯದರ್ಶಿಗಳುಶ್ರೀ ಕುಮಾರ ವಿಜಯ ನಾಟಕ ಸಂಘ (ರಿ), ಚಿತ್ತರಗಿ, ಬಿಜಾಪುರ 7,00,000/-
5. ಶ್ರೀ ಎಲ್.ಬಿ.ಶೇಖ್ ಮಾಸ್ತರ, ಮಾಲೀಕರುಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ ವಿಜಾಪುರ 7,00,000/-
6. ಶ್ರೀ ವೀರಯ್ಯಸ್ವಾಮಿ ಮಂಡಲಗೇರಿ, ಮಾಲೀಕರುಶ್ರೀ ಗುರು ತೋಂಟದಾರ್ಯನಾಟ್ಯ ಸಂಘ, ಮಂಡಲಗೇರಿ, ಕೊಪ್ಪಳ 6,00,000/-
7. ಶ್ರೀ ಅಯ್ಯಣ್ಣಸ್ವಾಮಿ ಹಿರೇಮಠ, ಮಾಲೀಕರುಶ್ರೀ ಗುರು ವಿಶ್ವರಾಧ್ಯ ನಾಟ್ಯ ಸಂಘ, ಜೇವರ್ಗಿ, ಗುಲಬರ್ಗಾ 6,00,000/-
8. ಶ್ರೀ ರಾಜಣ್ಣ ಜೇವರಗಿ, ಮಾಲೀಕರುವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ, ಜೇವರ್ಗಿ ತಾಲ್ಲೂಕು, ಗುಲಬರ್ಗಾ 6,00,000/-